Friday, October 28, 2011

ಡುಂ ಡುಂ ಡುಂ...

ಸಾವಿತ್ರಕ್ಕ ಸಂತೇಗ್ ಹೋತು 
ಒಣ ಮೀನ ತಕ್ಕಬಂತು ...
ಬಾಣಲಿನಾಗೆ ಎಣ್ಣೆ ಇಲ್ಲ
ಡುಂ ಡುಂ ಡುಂ...
                                                                                        
ಪಕ್ಕುದ್  ಮನೆ ವಿಶಾಲು
ಅಂಗಡಿ ಹೋಗಿ ತಂತು ಹಾಲು
ಕಾಪಿ ಮಾಡಾಕ್ ಸಕ್ರೆ ಇಲ್ಲ
ಡುಂ ಡುಂ ಡುಂ ...

ಗುಡಿಯಾಗೆ ಪೂಜೆ ಭಟ್ರು
ಬಾವಿಗೋಗಿ ನೀರು ತಂದ್ರು
ಬಾರಿಸೋಕೆ ಘಂಟೆ ಇಲ್ಲ
ಡುಂ ಡುಂ ಡುಂ ...

ಮೇಘರವಳ್ಳಿ ಟೀಚರ್ರು
ಪ್ರಸ್ನೆಯ ಕೇಳುದ್ರು
ಬಾರಿಸೋಕೆ ಬೆತ್ತ ಇಲ್ಲ
ಡುಂ ಡುಂ ಡುಂ ....

ಕೆರೆನಾಗ್ ಈಜಿ ಸಂಜೆಗಂಟ
ಕತ್ತಲ್ನಾಗೆ ಮನೇಗ್ ಹೊಂಟ
ಕಿಟ್ಟನ್ ಚಡ್ಡಿ ಒಣಗೇ ಇಲ್ಲ
ಡುಂ ಡುಂ ಡುಂ ....

ಮನೆ ಮುಂದೆ ನಾಯಿ ಕುಂತು
ರಾತ್ರಿ ಎಲ್ಲ ಬೊಗಳುತ್ತಿತ್ತು
ರಸ್ತೆನಾಗೆ ಯಾರು ಇಲ್ಲ
ಡುಂ ಡುಂ ಡುಂ ...

ಪದ್ಯ ಓದಿ ಇಲ್ಲಿಗಂಟ
ಮೋರೆ ಮ್ಯಾಲೆ ನಗು ಬಂತು
ಬರ್ದೇ ಇದ್ರೂ ಚಿಂತೆ ಇಲ್ಲ
ಡುಂ ಡುಂ ಡುಂ ...

Monday, October 24, 2011

ಸೋಲು


ಬೀಗ ಜಡಿದ  ಬಾಗಿಲಿನ
ಕೀಲಿ ಕೈ ತುಕ್ಕು ಹಿಡಿದಿದೆ
ಮುಚ್ಚಿದ ಅವಕಾಶದ ಅರಮನೆಯಲ್ಲೂ ...

ಬರಿಗಾಲಿಗೆ
ಚುಚ್ಚಿದ ಮುಳ್ಳುಗಳೇ  ಸವೆಯುತ್ತಿವೆ 
ಕೊನೆ ಕಾಣದ ಸಾಧನೆಯ ಹಾದಿಯಲ್ಲೂ ...

ಸ್ವಂತ ಮನವೇ
ಜೊತೆ ನೀಡಲು ಮರೆತಿದೆ...
ಒಂಟಿತಾಣದ ಏಕಾಂತದಲ್ಲೂ ....

ಪುಟಿ ದೇಳುತ್ತಿಲ್ಲ
ಅಂತರಾಳದ  ಚೈತನ್ಯ
ಆತ್ಮ ಕಂಡ ಸೋಲಿನಲ್ಲೂ...

-ಗೆಳೆಯ (BRB)

Monday, October 17, 2011

ಬಾಳನ್ನು ಪ್ರೀತಿಸು ...

ರಾತ್ರಿ ಇದ್ದರೇನಂತೆ
ಹಗಲನ್ನು ಕಾತರಿಸು ..


 ಗೆಳೆಯ (BRB)


Thursday, October 13, 2011

ಓಟ >>>>>

                                                             ಬದುಕು ನೂರು ಮೀಟರ್ ನ ಓಟ >>>>> !!!

ನಡುವೆಯೇ ಸುಸ್ತಾಗಿ
ಏದುಸಿರು ಬಿಡುವಂತಹ ಅವಸ್ಥೆ...
ಕಾಲಿರುವವ , ಇಲ್ಲದೆ ಇರುವವ
ಎಲ್ಲರಿಗೂ ಒಂದೇ ಪಥ..
ಸ್ಪರ್ಧಿ ತಾ ಓಡುವುದ ಬಿಟ್ಟು
ಪಕ್ಕದವನನ್ನು ನೋಡುತಾ
ವೀಕ್ಷಕನಾಗಿರುವ..!
ಮುಟ್ಟುವುದೇ ಇಲ್ಲ
ತಟ್ಟುವ ಚಪ್ಪಾಳೆ
ಯಾರ ಕಿವಿಗೂ ..>!
ಕಾದು ನೋಡಬೇಕು
ಒಬ್ಬನಾದರೂ ಓಡಿ
ಮುಟ್ಟುವನೆ ಗುರಿ ಕೊನೆಗೂ >>>> -----}
                                                                                                                                         -ಗೆಳೆಯ (BRB)ಯಾವುದು ಸತ್ಯ?

ಕಂಡಿದ್ದು ?
ಪ್ರಮಾಣಿಸಿ ನೋಡಿಲ್ಲವಲ್ಲಾ !!
ಆಲಿಸಿದ್ದು ?
ಆಲಿಸಿದ್ದೆಲ್ಲಾ ಸತ್ಯವಾಗೋದಿಲ್ಲ !
ಸ್ಪರ್ಶಿಸಿದ್ದು ?ಸೂಕ್ಷ್ಮವಾಗಿರೋದನ್ನ  ಸ್ಪರ್ಶಿಸೋಕಾಗೋಲ್ಲ !!
ಹಾಗಾದರೆ ಪರಿಮಳ?
ಗ್ರಹಿಸಲು ನಿಲುಕದ್ದು ಬೇಕಾದಷ್ಟಿವೆಯಲ್ಲ !!
ಮತ್ತೆ ರುಚಿಸಿದ್ದು ?
ಕಹಿಯಾಗಿರೋದೆಲ್ಲ ಸತ್ಯವಲ್ಲ !!

ಎಲ್ಲವೂ ಸುಳ್ಳೇ?

ಅನುಭವ ; ಅನುಭಾವ? ಭ್ರಮೆಯೇ?


                                                              ---ಗೆಳೆಯ (BRB)

Wednesday, October 12, 2011

ಮುದ್ದಾಡಲೇ???

ಕಡು ಕತ್ತಲೆಯ ಹಿಂದೆ ಹೊಳೆದ
ಕಾಡಿಗೆಯ ಕಣ್ಣು ಗಳು ..
ಆ ಕಣ್ಣಿನಲ್ಲಿ
ಬಲು ತೀಕ್ಷ್ಣ ನೋಟ ..
ಬಿರ ಬಿರನೆ ನಡೆದಾಡಿದರೂ
ದನಿ ಮಾಡದ ಮೆತ್ತನೆಯ ಪಾದ ...
ತೆಳು ಗಾಳಿಯೊಡನಾಡುವ
ಬಳುಕುವಾ ತೆಳ್ಳನೆಯ ದೇಹ ..
ನಾಲಗೆಯ ತುದಿಯಲ್ಲಿ
ಸಜ್ಜೇನ ಹನಿ..
ಮೊಗದ ಮೇಲೆ ಮುದ್ದು
ತುಂಟಾಟ ...
ಮುದ್ದಾಡಬೇಕು ಅನಿಸುತಿದೆ ತುಂಬಾನೇ ...
.
.
.
.
.
.
ಏ ಟಿಂಕು...
ಸಾಕು ನಾ ನಿನ್ನ ಹೊಗಳಿದ್ದು
ಎಷ್ಟಾದರೂ ನಿನ್ನ ಬಾಲ ಡೊಂಕು ....!!


ನಮ್ ಮನೆ ನಾಯಿ ಟಿಂಕು ಬಗ್ಗೆ ಹೇಳಿದ್ದು ಡೋಂಟ್ ಫೀಲ್ freinds...
 ಮುದ್ದಾಡಲೇ

Tuesday, October 11, 2011

ನೆನಹು

                                     ನಗುವ ಮುಗುಳ್ನಗುವೂ ನಗಲಾರದೆ ನಕ್ಕಿದೆ
ಅಳುವ ಕಂಗಳೂ ಅಳಲಾರದೆ ಅತ್ತಿದೆ
ಈಗ ಸುಮ್ಮನಿರದ ಮೌನವೂ ಮಾತನಾಡಿದೆ
ಸಂದರ್ಭ ಬದಲಾದಾಗ
ತಿರುವು ಎದುರಾದಾಗ
ಆಗಲಾರದ ಆಕಸ್ಮಿಕಗಳೂ
ವಿಸ್ಮಯ ಮುದದೊಂದಿಗೆ
ಅವಿಸ್ಮರಣೀಯ ನೆನಹುಗಳಾಗಿ
ತೀಡುತ್ತವೆ ಕಾಡುತ್ತವೆ
ಸುಡುತ್ತಲೇ  ಇರುತ್ತವೆ ...
                                            ---ಗೆಳೆಯ (BRB)
                                                                                 

Monday, October 10, 2011

ಕವಿರಾಜ್

ಕಣ ಕಣದಲ್ಲೂ ಕಲೆತಿರುವ ಶಾರದೆಯ
ಪದಗಳಲ್ಲಿ ಶ್ರುತಿಯೊಡನೆ ಪೋಣಿಸಿ
ನಾಗವಲ್ಲಿಯ ಮೊಗದ ಸೌಂದರ್ಯದ ಬಲದಲ್ಲಿ  
ಗರನೆ ಗರ ಗರನೆ ಧರಣಿಯ ತಿರುಗಿಸಿ
ಮಂದಾಕಿನಿಯ ಸುಡುವ ಕಿಡಿಯಲ್ಲಿ
ಸಿಡಿಲನ್ನು ಹೊತ್ತಿಸಿ
ಗಗನವೇ ಬಾಗಿ ಹೇಳಿದಂತೆ
ಪ್ರೀತಿಯನ್ನು,
ಗುಬ್ಬಚ್ಚಿ ಗೂಡಿನಲ್ಲಿ ಬಚ್ಚಿಟ್ಟು ,
ಹಾರ್ಟ್ ಅನ್ನೋ ಅಡ್ಡಾದಲ್ಲಿ

ನಡೆದಾಡುವ ಕಾಮನಬಿಲ್ಲ ಜೊತೆ

ಜೇನ ಹನಿಯ ಜಿನು ಜಿನುಗಿಸಿ
ಶೀತಲಾ ಕೋಮಲಾ ತಂಗಾಳಿಯಾ ಬಾಳಲ್ಲಿ ತಂದ ಪ್ರೀತಿಯು  
ಒಂದೇ ಒಂದು ಸಾರಿ  ಕಣ್ಮುಂದೆ ಬಂದಾಗ 
ಸವಿ ಮಾತೊಂದ ಪಿಸುಗುಡುತ್ತಲೇ
ಹೂಮುತ್ತ ಕದ್ದು ಕೊಟ್ಟ ...
ಆದರೂ
ಸುಮ್ಮನೆ ಯಾಕೆ ಬಂದೆ  
ಮಿಂಚಂತೆ ಕಣ್ಣ ಮುಂದೆ ಎಂಬ ಪ್ರಶ್ನೆ ಬೇರೆ ? 

ಹೀಗೇಕೆ ನಮಗೆ ನೆನೆಪಾಗುತ್ತೆ ಈ ಸಾಲುಗಳು ?
ಯಾಕೆ ಅಂದ್ರೆ !!
ಥರ ಥರ ಥರ ಒಂಥರಾ ಕಾವ್ಯ
ಯಾರೂ ಬರೆಯೋಕಾಗೋಲ್ಲ  ನಮ್ ಕವಿರಾಜ್ ಥರ...!


ರವಿ ಕಾಣದ್ದನ್ನು ಕವಿ ಕಂಡನಂತೆ
ಕವಿ ಕಾಣದ್ದನ್ನು ನಮ್ಮ ಕವಿರಾಜ್ ಕಂಡರಂತೆ ...
ಭಾವ ಸಿಂಚನಕ್ಕೆ ಮುನ್ನುಡಿಯ ಮುತ್ತನ್ನಿತ್ತು 
ಹಾರೈಸಿದ ಕವಿರಾಜ್ ರವರಿಗೆ ಭಾವಪೂರ್ಣ ವಂದನೆ...

Friday, October 7, 2011

Mr. ಬುಟ್ಟೆ

ಶಕ್ತಿಯುಂಟು ಕೈಗಳಲ್ಲಿ
ಯುಕ್ತಿಯುಂಟು ಬುರುಡೆಯಲ್ಲಿ
ಕಲರ್ ಉಂಟು ಕೂದಲಲ್ಲಿ
ಕದರ್ ಉಂಟು ಮಾತಿನಲ್ಲಿ
ಸ್ಮೈಲ್ ಉಂಟು ಮುಖದಲ್ಲಿ
So ,ಕನಸು ತುಂಬಿ ಕಂಗಳಲ್ಲಿ
ಹೊರಟಿರುವ  ನಮ್ಮ ಬುಟ್ಟೆ ಬೀದರ್ express ನಲ್ಲಿ ...

Tuesday, October 4, 2011

..

ಪ್ರೀತಿ,
ಬಾಗಿಲಲ್ಲೇ ನಿಂತ ಅತಿಥಿ
ಎರಡೂ ಒಂದೇ ರೀತಿ ...!
ಒಳ ಕರೆದರೆ ಮುಗಿಯದು ಸಂಗತಿ
ಕರೆಯದಿದ್ದರೆ ಒಳ ಬಾರದು ಎಂಬ ಭೀತಿ ...

Monday, October 3, 2011

ದೇವರು ಹೃದಯದ ಆತ್ಮೀಯ ಮಾತನು ಆಲಿಸುವ...
ಕಣ್ಣ ಕನಸಿನ ಪರದೆಯ ಸರಿಸುವ...
ಸೋಲನು ಒಪ್ಪಿಕೊಳ್ಳದಿರು ಗೆಳೆಯಾ
ಕಹಿ ದಿನಗಳು ಬದುಕಲು ಕಲಿಸುತ್ತವೆ ....!!!

ಹೊರಟಿದೆ

ತಿಳಿಯದ ಮರೆವು ನೆನಪನ್ನು
ತಿಳಿಯಾಗಿ ಕದಡಿದೆ ...
ಸವಿ ಕ್ಷಣಗಳು
ತಳಕ್ಕೆ ಸೇರಿವೆ...
ಆಘಾತಗಳು
ತಳ ವೂರದೆ
ಕ್ರಮವಾಗಿ ತುಳುಕುತ್ತಿವೆ ...
ಸುತ್ತ ಅಸ್ಪಷ್ಟ ಅಂಬರದ ಗೋಡೆ !
ಬಲುವಾಗಿ ಹಿಡಿದಿಟ್ಟಿದೆ
ಹೊಸ ಹನಿಯ ಒಳ ಬಿಡದೆ ...
ಸತ್ತ ಕಂಬನಿಯೊಳಗೆ
ಸುಟ್ಟ ಮಾತು ನೂರಾರು ...
ಪಿಸುಗುಟ್ಟಿ ಹೇಳದ ಹೊರತು
ಆರಿ ಹೋಗಲಾರದು ಹಾಗೆಯೇ...
ಬೀಸಲು ಮರೆತ ಬಿರುಗಾಳಿ
ದಿಕ್ಕೆಡಿಸಿ ತಾನೇ ಮರೆತಿದೆ .
ತನ್ನ ತಾನರಿಯುವ ಮುನ್ನ ,
ಬದಲಾವಣೆಯ ಬತ್ತಳಿಕೆಯಲ್ಲಿ ಕೂತ
ಗುರಿಯೆಡೆಗೆ ಹೊರಟ ಬಾಣವಾಗಿದೆ
ಮನಸು ; ಚೂರೂ ಮೊನಚಿಲ್ಲದೆ...