Monday, February 7, 2011

ಬಣ್ಣ?

ನಾಲ್ಕು ವರ್ಷಗಳ ಮುನ್ನ
***
ಒಮ್ಮೆ ಮಾತ್ರ ನೋಡಿದ್ದೆ ಅವಳನ್ನ
***
ತುಂಬಿರುವಳು ನನ್ನ ಕಣ್ಣ
***
ಮರೆಯಲಾಗದು ಅವಳ ಚೆಲುವನ್ನ
***
ಮೈಮರೆತು ನಾನಾಗಿರುವೆ ಗೋಡೆಗೆ ಬಳಿಯುವ ಸುಣ್ಣ
***
ಅವಳಾಗುವಳೇ ಸುಣ್ಣದ ಮೇಲೆ ಬಡಿಯುವ ರಂಗು ರಂಗಿನಾ ಬಣ್ಣ?

Tuesday, December 14, 2010

ಅವತಾರ !

ಕಪ್ಪು ತಂಪುನೆಲದ ಮೇಲೆ
ನೀಲಿ ರಕ್ತ ಸುರಿದಿದೆ

ಕೋಳಿಯೊಂದು ಮೊಟ್ಟೆಯಿಟ್ಟು
ಕಾವ ಕೊಡದೆ ಹೋಗಿದೆ

ಮುಗ್ದ ಜನರ ಪಿತ್ತವೆಲ್ಲ
ಒಡನೆ ನೆತ್ತಿಗೇರಿದೆ

ಪ್ರಜಾತಂತ್ರ ಮಂತ್ರವೆಲ್ಲ
ಬರಿಯ ಬೊಗಳೆಯಾಗಿದೆ

ಕಳ್ಳ ಕಾಕರೆಲ್ಲ ಎದ್ದು
ದೋಚಿ ಬಾಚಿದ್ದಾಗಿದೆ

ಹಗಲು ಇರುಳು ಎರಡೂ ಕೂಡ
ಹದಗೆಟ್ಟಿ ಹೋಗಿದೆ

ಹಾಗೇ ಇರುವ ಹಗರಣಗಳು
ಹಾಯಾಗಿ ಮಲಗಿವೆ

ಕೇಳೋರಿಲ್ಲ ಹೇಳೋರಿಲ್ಲ
ಪ್ರಶ್ನೆಗಳು ಹಲವಾರಿವೆ


ಮ0ದಿ ದುಡಿದ ಚಿಂದಿ ಹಣಕೆ
ನಾಯಿಗಳು ಬಾಯೂರಿವೆ

ಬೊಕ್ಕ ತಲೆಯ ಚೊಕ್ಕರೆಲ್ಲ
ಟೋಪಿ ಹಾಕಿ ನಲಿದಿವೆ

ಮಹರ್ಷಿಗಳೂ ಮನಸಿನಲ್ಲಿ
ಮಾಸಿದ ಮಾತನಾಡಿವೆ

ಗರಿಕೆ ಕುಡಿಯ ಬೇರು ಕೂಡ
ಸಹನೆಯಿರದೆ ನಲುಗಿದೆ

ಭಾಷೆ ಬರುವ ಧೀರರಿಗೆಲ್ಲ
ತೃಷೆ ತೀರದಾಗಿದೆ

ಬಿಳಿಯ ಬೆಳಕಿನಲ್ಲೂ ಕೂಡ
ದೋಷವೊಂದು ಕಂಡಿದೆ

ತಿಳಿಯಾದ ನೀರಲ್ಲೂ
ಸತ್ತ ಮೀನ ಶವವಿದೆ

ಗಂಧವಿರುವ ಗಾಳಿ ಕೂಡ
ಹೊಗೆಯಾಗಿ ಹೋಗಿದೆ

ನ್ಯಾಯ ಸಿಗದ ಚರಿತೆಯೊಂದು
ರಕ್ತ ಚರಿತೆಯಾಗಿದೆ

ದೇಶ ರಮ್ಯವಾದರೂ
ದೇಶೀಯತೆ ನಗಣ್ಯವಾಗಿದೆ !

ಇರುವವರೆಲ್ಲ ದುಷ್ಟರಾದರೂ
ಕಾಲವe ಕೆಟ್ಟದ್ದೆಂದು ದೂರಲಾಗಿದೆ

ಯುಗಪುರುಷನು ಅವತಾರವ
ಮತ್ತೆ ತಳೆಯಬೇಕಿದೆ....

Friday, October 29, 2010

ಭೂಮಿಯಾಚೆ ಇನ್ನೊಂದು ಜಗವಿದೆ

ಅಲ್ಲಿ ನೀನೊಬ್ಬಳೆ ಮತ್ತು ನಾನೊಬ್ಬನೇ...

ಬ್ಲಾಕ್ ಕಾಮನಬಿಲ್ಲು !

ಆ ನಿನ್ನ ಕಣ್ಣ ಹುಬ್ಬು
ನನ್ನ ಮೇಲೆ ಮುನಿಸು ಬಂದಿರುವಾಗ ...

Tuesday, October 26, 2010

ಮುಜುಗರ

ನಿನ್ನ ನೋಡಿದ ದಿನದಿಂದ ನಾ ನಿನ್ನ ಪ್ರಿಯಕರ !

ನೀ ಕಾಣದಿರುವಾಗ ನೋಡಲು ಹಂಬಲ

ನೀ ದೂರ ನಿಂತಾಗ ನೋಡಲು ತುಡಿತ
ನೀ ಸನಿಹ ಬಂದಾಗ ನೋಡಲು ರಮಿತ
ನೀ ಕನಸಾದಾಗ ನೋಡಲು ಸಡಗರ
ನೀ ನೆನಪಾದಾಗ ನೋಡಲು ಅವಸರ


ನೀ ಎದುರು ಬಂದಾಗ ನೋಡಲು ಮುಜುಗರ !