ಅಮ್ಮ : ದೋಸೆ ಇನ್ನೊಂದ್ ಹಾಕ್ಲೇನೋ ??

ನಾನು : ಬೇಡ ಸಾಕು, ತಿಂತಾ ಇರೋದ್ ಕಾಣಲ್ವ

ನಾನು : ಸಾಕ್ ಹೋಗಮ್ಮಾ ... ಹೇಳಿದ್ರೆ ಅರ್ಥ ಆಗಲ್ವಾ



ಅಮ್ಮ: ಹು ... ಆಫ್ ಮಾಡ್ತಿದೀನಿ ಒಲೆ ..
ನಾನು : (2 ದೋಸೆ ತಿನ್ನೋಕೆ 15 ನಿಮಿಷ ತಗೊಂಡು) ಅಮ್ಮಾ ... ದೋಸೆ



ಅಮ್ಮ : (without any second thought , without saying any word ದೋಸೆ ಕಾವಲಿ ಮತ್ತೆ ಇಟ್ಟು) ದೋಸೆ ರೆಡಿ ತಗೋಳೋ ತಿನ್ನು ..
ನಾನು :

ಅಮ್ಮ : ನಾನು ಮತ್ತೆ ಮಾಡ್ಕೊತೀನಿ , ತಗೋ ಟೀ ಇಟ್ಟಿದೀನಿ ಇಲ್ಲಿ 

ನಾನು : ಟೀನಾ ...!! ಟೀ ಬೇಡ ಕಾಫಿ ಮಾಡ್ ಕೊಡು .


ಅಮ್ಮ : ನೀನು ತಲೆ ಮೇಲ್ ಏರಿದಿಯಾ ಈತ್ತಿಚ್ಗೆ ...




ನಾನು : (ಸಿಟ್ಟಿಂದ ಹೊರಗೆ ಹೋದೆ .. )


ಅಮ್ಮ : (2 mins later) ಟೀ ನಾನ್ ಕುಡಿತೀನಿ ತಗೋ ಕಾಫಿ ಮಾಡಿದೀನಿ

ನಾನು : ಹೂ೦ ಕೊಡು .. (ಸುರ್ರ್.. ಆಹಾ ಸೂಪರ್ ಅಂತ ಮನಸಲ್ಲಿ ಹೇಳುತ್ತಾ ) ಸಕ್ರೆ ಜಾಸ್ತಿ ಹೋಗಮ್ಮಾ .. !!!



























ಅದು ಹಾಗೇನೇ ಅಮ್ಮನ ಕೈರುಚಿ ಸಿಹಿ ಜಾಸ್ತೀನೆ ಇರುತ್ತೆ .. ಗೊತ್ತಿದ್ರೂ ಕೂಡಾ ನಾವು ಯಾವಾಗ್ಲೂ ಅಮ್ಮನ್ನ ಗೋಳ್ ಹೊಯ್ಕೊಳೊದನ್ನ ಬಿಡಲ್ಲ ಅಲ್ವಾ ಫ್ರೆಂಡ್ಸ್ ??..