Monday, December 12, 2011

Friday, December 2, 2011

Thursday, November 10, 2011

Friday, October 28, 2011

ಡುಂ ಡುಂ ಡುಂ...





ಸಾವಿತ್ರಕ್ಕ ಸಂತೇಗ್ ಹೋತು 
ಒಣ ಮೀನ ತಕ್ಕಬಂತು ...
ಬಾಣಲಿನಾಗೆ ಎಣ್ಣೆ ಇಲ್ಲ
ಡುಂ ಡುಂ ಡುಂ...
                                                                                        
ಪಕ್ಕುದ್  ಮನೆ ವಿಶಾಲು
ಅಂಗಡಿ ಹೋಗಿ ತಂತು ಹಾಲು
ಕಾಪಿ ಮಾಡಾಕ್ ಸಕ್ರೆ ಇಲ್ಲ
ಡುಂ ಡುಂ ಡುಂ ...

ಗುಡಿಯಾಗೆ ಪೂಜೆ ಭಟ್ರು
ಬಾವಿಗೋಗಿ ನೀರು ತಂದ್ರು
ಬಾರಿಸೋಕೆ ಘಂಟೆ ಇಲ್ಲ
ಡುಂ ಡುಂ ಡುಂ ...

ಮೇಘರವಳ್ಳಿ ಟೀಚರ್ರು
ಪ್ರಸ್ನೆಯ ಕೇಳುದ್ರು
ಬಾರಿಸೋಕೆ ಬೆತ್ತ ಇಲ್ಲ
ಡುಂ ಡುಂ ಡುಂ ....

ಕೆರೆನಾಗ್ ಈಜಿ ಸಂಜೆಗಂಟ
ಕತ್ತಲ್ನಾಗೆ ಮನೇಗ್ ಹೊಂಟ
ಕಿಟ್ಟನ್ ಚಡ್ಡಿ ಒಣಗೇ ಇಲ್ಲ
ಡುಂ ಡುಂ ಡುಂ ....

ಮನೆ ಮುಂದೆ ನಾಯಿ ಕುಂತು
ರಾತ್ರಿ ಎಲ್ಲ ಬೊಗಳುತ್ತಿತ್ತು
ರಸ್ತೆನಾಗೆ ಯಾರು ಇಲ್ಲ
ಡುಂ ಡುಂ ಡುಂ ...

ಪದ್ಯ ಓದಿ ಇಲ್ಲಿಗಂಟ
ಮೋರೆ ಮ್ಯಾಲೆ ನಗು ಬಂತು
ಬರ್ದೇ ಇದ್ರೂ ಚಿಂತೆ ಇಲ್ಲ
ಡುಂ ಡುಂ ಡುಂ ...

Monday, October 24, 2011

ಸೋಲು


ಬೀಗ ಜಡಿದ  ಬಾಗಿಲಿನ
ಕೀಲಿ ಕೈ ತುಕ್ಕು ಹಿಡಿದಿದೆ
ಮುಚ್ಚಿದ ಅವಕಾಶದ ಅರಮನೆಯಲ್ಲೂ ...

ಬರಿಗಾಲಿಗೆ
ಚುಚ್ಚಿದ ಮುಳ್ಳುಗಳೇ  ಸವೆಯುತ್ತಿವೆ 
ಕೊನೆ ಕಾಣದ ಸಾಧನೆಯ ಹಾದಿಯಲ್ಲೂ ...

ಸ್ವಂತ ಮನವೇ
ಜೊತೆ ನೀಡಲು ಮರೆತಿದೆ...
ಒಂಟಿತಾಣದ ಏಕಾಂತದಲ್ಲೂ ....

ಪುಟಿ ದೇಳುತ್ತಿಲ್ಲ
ಅಂತರಾಳದ  ಚೈತನ್ಯ
ಆತ್ಮ ಕಂಡ ಸೋಲಿನಲ್ಲೂ...

-ಗೆಳೆಯ (BRB)

Monday, October 17, 2011

ಬಾಳನ್ನು ಪ್ರೀತಿಸು ...

ರಾತ್ರಿ ಇದ್ದರೇನಂತೆ
ಹಗಲನ್ನು ಕಾತರಿಸು ..






 ಗೆಳೆಯ (BRB)


Thursday, October 13, 2011

ಓಟ >>>>>

                                                             ಬದುಕು ನೂರು ಮೀಟರ್ ನ ಓಟ >>>>> !!!

ನಡುವೆಯೇ ಸುಸ್ತಾಗಿ
ಏದುಸಿರು ಬಿಡುವಂತಹ ಅವಸ್ಥೆ...
ಕಾಲಿರುವವ , ಇಲ್ಲದೆ ಇರುವವ
ಎಲ್ಲರಿಗೂ ಒಂದೇ ಪಥ..
ಸ್ಪರ್ಧಿ ತಾ ಓಡುವುದ ಬಿಟ್ಟು
ಪಕ್ಕದವನನ್ನು ನೋಡುತಾ
ವೀಕ್ಷಕನಾಗಿರುವ..!
ಮುಟ್ಟುವುದೇ ಇಲ್ಲ
ತಟ್ಟುವ ಚಪ್ಪಾಳೆ
ಯಾರ ಕಿವಿಗೂ ..>!
ಕಾದು ನೋಡಬೇಕು
ಒಬ್ಬನಾದರೂ ಓಡಿ
ಮುಟ್ಟುವನೆ ಗುರಿ ಕೊನೆಗೂ >>>> -----}
                                                                                                                                         -ಗೆಳೆಯ (BRB)



ಯಾವುದು ಸತ್ಯ?

ಕಂಡಿದ್ದು ?
ಪ್ರಮಾಣಿಸಿ ನೋಡಿಲ್ಲವಲ್ಲಾ !!
ಆಲಿಸಿದ್ದು ?
ಆಲಿಸಿದ್ದೆಲ್ಲಾ ಸತ್ಯವಾಗೋದಿಲ್ಲ !
ಸ್ಪರ್ಶಿಸಿದ್ದು ?ಸೂಕ್ಷ್ಮವಾಗಿರೋದನ್ನ  ಸ್ಪರ್ಶಿಸೋಕಾಗೋಲ್ಲ !!
ಹಾಗಾದರೆ ಪರಿಮಳ?
ಗ್ರಹಿಸಲು ನಿಲುಕದ್ದು ಬೇಕಾದಷ್ಟಿವೆಯಲ್ಲ !!
ಮತ್ತೆ ರುಚಿಸಿದ್ದು ?
ಕಹಿಯಾಗಿರೋದೆಲ್ಲ ಸತ್ಯವಲ್ಲ !!

ಎಲ್ಲವೂ ಸುಳ್ಳೇ?

ಅನುಭವ ; ಅನುಭಾವ? ಭ್ರಮೆಯೇ?


                                                              ---ಗೆಳೆಯ (BRB)

Wednesday, October 12, 2011

ಮುದ್ದಾಡಲೇ???

ಕಡು ಕತ್ತಲೆಯ ಹಿಂದೆ ಹೊಳೆದ
ಕಾಡಿಗೆಯ ಕಣ್ಣು ಗಳು ..
ಆ ಕಣ್ಣಿನಲ್ಲಿ
ಬಲು ತೀಕ್ಷ್ಣ ನೋಟ ..
ಬಿರ ಬಿರನೆ ನಡೆದಾಡಿದರೂ
ದನಿ ಮಾಡದ ಮೆತ್ತನೆಯ ಪಾದ ...
ತೆಳು ಗಾಳಿಯೊಡನಾಡುವ
ಬಳುಕುವಾ ತೆಳ್ಳನೆಯ ದೇಹ ..
ನಾಲಗೆಯ ತುದಿಯಲ್ಲಿ
ಸಜ್ಜೇನ ಹನಿ..
ಮೊಗದ ಮೇಲೆ ಮುದ್ದು
ತುಂಟಾಟ ...
ಮುದ್ದಾಡಬೇಕು ಅನಿಸುತಿದೆ ತುಂಬಾನೇ ...
.
.
.
.
.
.
ಏ ಟಿಂಕು...
ಸಾಕು ನಾ ನಿನ್ನ ಹೊಗಳಿದ್ದು
ಎಷ್ಟಾದರೂ ನಿನ್ನ ಬಾಲ ಡೊಂಕು ....!!






ನಮ್ ಮನೆ ನಾಯಿ ಟಿಂಕು ಬಗ್ಗೆ ಹೇಳಿದ್ದು ಡೋಂಟ್ ಫೀಲ್ freinds...




 ಮುದ್ದಾಡಲೇ

Tuesday, October 11, 2011

ನೆನಹು

                                     ನಗುವ ಮುಗುಳ್ನಗುವೂ ನಗಲಾರದೆ ನಕ್ಕಿದೆ
ಅಳುವ ಕಂಗಳೂ ಅಳಲಾರದೆ ಅತ್ತಿದೆ
ಈಗ ಸುಮ್ಮನಿರದ ಮೌನವೂ ಮಾತನಾಡಿದೆ
ಸಂದರ್ಭ ಬದಲಾದಾಗ
ತಿರುವು ಎದುರಾದಾಗ
ಆಗಲಾರದ ಆಕಸ್ಮಿಕಗಳೂ
ವಿಸ್ಮಯ ಮುದದೊಂದಿಗೆ
ಅವಿಸ್ಮರಣೀಯ ನೆನಹುಗಳಾಗಿ
ತೀಡುತ್ತವೆ ಕಾಡುತ್ತವೆ
ಸುಡುತ್ತಲೇ  ಇರುತ್ತವೆ ...
                                            ---ಗೆಳೆಯ (BRB)
                                                                                 

Monday, October 10, 2011

ಕವಿರಾಜ್

ಕಣ ಕಣದಲ್ಲೂ ಕಲೆತಿರುವ ಶಾರದೆಯ
ಪದಗಳಲ್ಲಿ ಶ್ರುತಿಯೊಡನೆ ಪೋಣಿಸಿ
ನಾಗವಲ್ಲಿಯ ಮೊಗದ ಸೌಂದರ್ಯದ ಬಲದಲ್ಲಿ  
ಗರನೆ ಗರ ಗರನೆ ಧರಣಿಯ ತಿರುಗಿಸಿ
ಮಂದಾಕಿನಿಯ ಸುಡುವ ಕಿಡಿಯಲ್ಲಿ
ಸಿಡಿಲನ್ನು ಹೊತ್ತಿಸಿ
ಗಗನವೇ ಬಾಗಿ ಹೇಳಿದಂತೆ
ಪ್ರೀತಿಯನ್ನು,
ಗುಬ್ಬಚ್ಚಿ ಗೂಡಿನಲ್ಲಿ ಬಚ್ಚಿಟ್ಟು ,
ಹಾರ್ಟ್ ಅನ್ನೋ ಅಡ್ಡಾದಲ್ಲಿ

ನಡೆದಾಡುವ ಕಾಮನಬಿಲ್ಲ ಜೊತೆ

ಜೇನ ಹನಿಯ ಜಿನು ಜಿನುಗಿಸಿ
ಶೀತಲಾ ಕೋಮಲಾ ತಂಗಾಳಿಯಾ ಬಾಳಲ್ಲಿ ತಂದ ಪ್ರೀತಿಯು  
ಒಂದೇ ಒಂದು ಸಾರಿ  ಕಣ್ಮುಂದೆ ಬಂದಾಗ 
ಸವಿ ಮಾತೊಂದ ಪಿಸುಗುಡುತ್ತಲೇ
ಹೂಮುತ್ತ ಕದ್ದು ಕೊಟ್ಟ ...
ಆದರೂ
ಸುಮ್ಮನೆ ಯಾಕೆ ಬಂದೆ  
ಮಿಂಚಂತೆ ಕಣ್ಣ ಮುಂದೆ ಎಂಬ ಪ್ರಶ್ನೆ ಬೇರೆ ? 

ಹೀಗೇಕೆ ನಮಗೆ ನೆನೆಪಾಗುತ್ತೆ ಈ ಸಾಲುಗಳು ?
ಯಾಕೆ ಅಂದ್ರೆ !!
ಥರ ಥರ ಥರ ಒಂಥರಾ ಕಾವ್ಯ
ಯಾರೂ ಬರೆಯೋಕಾಗೋಲ್ಲ  ನಮ್ ಕವಿರಾಜ್ ಥರ...!


ರವಿ ಕಾಣದ್ದನ್ನು ಕವಿ ಕಂಡನಂತೆ
ಕವಿ ಕಾಣದ್ದನ್ನು ನಮ್ಮ ಕವಿರಾಜ್ ಕಂಡರಂತೆ ...
ಭಾವ ಸಿಂಚನಕ್ಕೆ ಮುನ್ನುಡಿಯ ಮುತ್ತನ್ನಿತ್ತು 
ಹಾರೈಸಿದ ಕವಿರಾಜ್ ರವರಿಗೆ ಭಾವಪೂರ್ಣ ವಂದನೆ...

Friday, October 7, 2011

Mr. ಬುಟ್ಟೆ

ಶಕ್ತಿಯುಂಟು ಕೈಗಳಲ್ಲಿ
ಯುಕ್ತಿಯುಂಟು ಬುರುಡೆಯಲ್ಲಿ
ಕಲರ್ ಉಂಟು ಕೂದಲಲ್ಲಿ
ಕದರ್ ಉಂಟು ಮಾತಿನಲ್ಲಿ
ಸ್ಮೈಲ್ ಉಂಟು ಮುಖದಲ್ಲಿ
So ,ಕನಸು ತುಂಬಿ ಕಂಗಳಲ್ಲಿ
ಹೊರಟಿರುವ  ನಮ್ಮ ಬುಟ್ಟೆ ಬೀದರ್ express ನಲ್ಲಿ ...

Tuesday, October 4, 2011

..

ಪ್ರೀತಿ,
ಬಾಗಿಲಲ್ಲೇ ನಿಂತ ಅತಿಥಿ
ಎರಡೂ ಒಂದೇ ರೀತಿ ...!
ಒಳ ಕರೆದರೆ ಮುಗಿಯದು ಸಂಗತಿ
ಕರೆಯದಿದ್ದರೆ ಒಳ ಬಾರದು ಎಂಬ ಭೀತಿ ...

Monday, October 3, 2011

ದೇವರು ಹೃದಯದ ಆತ್ಮೀಯ ಮಾತನು ಆಲಿಸುವ...
ಕಣ್ಣ ಕನಸಿನ ಪರದೆಯ ಸರಿಸುವ...
ಸೋಲನು ಒಪ್ಪಿಕೊಳ್ಳದಿರು ಗೆಳೆಯಾ
ಕಹಿ ದಿನಗಳು ಬದುಕಲು ಕಲಿಸುತ್ತವೆ ....!!!

ಹೊರಟಿದೆ

ತಿಳಿಯದ ಮರೆವು ನೆನಪನ್ನು
ತಿಳಿಯಾಗಿ ಕದಡಿದೆ ...
ಸವಿ ಕ್ಷಣಗಳು
ತಳಕ್ಕೆ ಸೇರಿವೆ...
ಆಘಾತಗಳು
ತಳ ವೂರದೆ
ಕ್ರಮವಾಗಿ ತುಳುಕುತ್ತಿವೆ ...
ಸುತ್ತ ಅಸ್ಪಷ್ಟ ಅಂಬರದ ಗೋಡೆ !
ಬಲುವಾಗಿ ಹಿಡಿದಿಟ್ಟಿದೆ
ಹೊಸ ಹನಿಯ ಒಳ ಬಿಡದೆ ...
ಸತ್ತ ಕಂಬನಿಯೊಳಗೆ
ಸುಟ್ಟ ಮಾತು ನೂರಾರು ...
ಪಿಸುಗುಟ್ಟಿ ಹೇಳದ ಹೊರತು
ಆರಿ ಹೋಗಲಾರದು ಹಾಗೆಯೇ...
ಬೀಸಲು ಮರೆತ ಬಿರುಗಾಳಿ
ದಿಕ್ಕೆಡಿಸಿ ತಾನೇ ಮರೆತಿದೆ .
ತನ್ನ ತಾನರಿಯುವ ಮುನ್ನ ,
ಬದಲಾವಣೆಯ ಬತ್ತಳಿಕೆಯಲ್ಲಿ ಕೂತ
ಗುರಿಯೆಡೆಗೆ ಹೊರಟ ಬಾಣವಾಗಿದೆ
ಮನಸು ; ಚೂರೂ ಮೊನಚಿಲ್ಲದೆ...

Tuesday, September 27, 2011

ವಂದನೆ



ಜೀವನಕೆ ಜೀವಸಾರವ  ತುಂಬಿ
ನಗುವು ವಿದ್ಯೆಯ ಆಸರೆಯಾ ನಂಬಿ
ಮನವು ಈಗ ಹಾರಾಡುತ್ತಿರುವ ದುಂಬಿ ...

ಎಷ್ಟೊಂದು ಕಂದಮ್ಮಗಳ
ಬದುಕಿನ ಸೂಕ್ತಿಗೆ ಅಪಾರ ಶಕ್ತಿ ನೀಡಿ
ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ
SISTER ! ನಿಮಗಿದು ವಂದನೆ .....

Sunday, September 18, 2011

ಮರಳ ಮೇಲೆ ನಾಯಿ ನೆರಳು

ಅಪ್ಪ ಆಫೀಸ್ ಗೆ ,
ಅಮ್ಮ ಶಾಪಿಂಗ್ ಗೆ 
ಮಗ ಸ್ಕೂಲ್ ಗೆ
ಅಣ್ಣ ರೌಂಡ್ ಗೆ 
ತಮ್ಮ ಪ್ಲೇ ಗ್ರೌಂಡ್ ಗೆ 
ಅಕ್ಕ ದೇವಸ್ಥಾನಕ್ಕೆ 
ಅಜ್ಜಿ ಪಕ್ಕದ್ ಮನೆ ಹರಟೆಗೆ 
ಹೋದಾಗ 
ನಮ್ 
ನಾಯಿ ಟಾಮಿ 
ಪಾಪ ಒಂಟಿ ಬೇಜಾರಾಗಿ 
ಹೋಗ್ತಾ ಇದೆ ಬೀಚ್ ನಲ್ಲಿ ವಾಕ್ ಗೆ !


Thursday, September 15, 2011

ಇಂಜಿನಿಯರು ..

ಇಯರ್ ಮೇಲೆ yearu
ಕಳೆದು ಹೋಗಿದೆ ಅನ್ನೋದೇ fearu...
ಆದರೂ ಯಾವ papersu
ಆಗಿಲ್ಲ clearu
ಆಗ ಪಕ್ಕದಲ್ಲಿ ಇದ್ದಳು ನನ್ನ dearu....
ಅವಳು ಹೋದ ಮೇಲೆ ಫುಲ್ beero beeru ...
confusion ನಲ್ಲಿ ಇದ್ದಾಗ ಕಂಡರು ಸರ್.MV ಯವರು
ಕೊನೆಗೂ ಕೈ ಹಿಡುದ್ರು devru
ತಲೆ ಬುಡ ಗೊತ್ತಿಲ್ಲದಿದ್ರೂ
ಅಂತೂ ಇಂತೂ ಆಗಿಹೋದೆ ನಾನೂ ಒಬ್ಬ Engineeru.

Tuesday, September 13, 2011

ಅವಳು

ನನ್ನ ತನ್ನ ಪ್ರಾಣಕಿಂತ
ಹೆಚ್ಚಾಗಿ ಪ್ರೀತಿಸುವವಳು
ಹೌದು ಅವಳು....!
ಆ ಕಣ್ಣ ಪ್ರತಿ ಮಿಡಿತದಲ್ಲೂ
ನನ್ನ ಒಳಿತಿನ ನಿರೀಕ್ಷೆ ...
ನಾ ಅವಳ ಧಿಕ್ಕರಿಸಿದರೂ
ನನ್ನಿಂದ ಅವಳಿಗಿಲ್ಲ ಯಾವುದೇ ಅಪೇಕ್ಷೆ ...
ಅವಳ ಪ್ರೀತಿಗಿಂತ ಮಿಗಿಲಾದವು
ಕೇವಲ ಉತ್ಪ್ರೇಕ್ಷೆ .
ಹೌದು ಅವಳು...

ಅಮ್ಮ ...

Monday, September 12, 2011

Modern ಗಾದೆ

ಕ್ಯಾಂಟೀನೆ ಕೈಲಾಸ...
girls hostelge ಮೂರೇ ಮೆಟ್ಟಿಲು ...
ಕಾಲೇಜ್ಗೆ ಬಂದೋಳು ಕ್ಯಾಂಟೀನ್ ಗೆ ಬರದೆ ಇರ್ತಾಳ ?


ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಜೆಲ್ಲು ..


ಇಂಟರ್ನಲ್ಸ್ ಗೆ ಹೋದ ಮಾರ್ಕ್ಸು external ಬರೆದರೂ ಬರದು..


FCD ಆಸೆಯೇ ದುಃಖಕ್ಕೆ ಮೂಲ ...


ಆಕಳಿಕೆಯೇ ಭಾಗ್ಯ ...


ಪ್ರಿನ್ಸಿಯೇ ದೊಡ್ಡಪ್ಪ ..


ಕ್ಲಾಸ್ ಇದ್ದಷ್ಟು ಬಂಕ್ ಹಾಕು ..



Thursday, September 1, 2011

ಇರುಳು

ಇರುಳು @ U :
ಸಿಹಿಗನಸ ಕಂಡು ಅರಿಕೆಯನ್ನಿತ್ತೆ
ಬೆಳಕ ಬಂಧಿಸಲು ....ಓಕೆ
ನಿಮ್ಮಮ್ಮ ಬಂದಿರುವರು bed coffe ಹಿಡಿದು
ನಿನ್ನ ಎಬ್ಬಿಸಲು....ಜೋಕೆ !!!


Wednesday, June 22, 2011

ಸುಂದರ ಹುಡುಗಿ

ಸುಂದರ ಹುಡುಗಿ

ನಮ್ಮೂರಿಗೆ ಬಂದಳು ... : )
ನಮ್ಮ ಬೀದಿಯಲ್ಲೇ ನಡೆದಳು ... : )

ನನ್ನೆದುರಿಗೆ ನಕ್ಕಳು :) :)

ಒಂಟಿಯಾಗಿ ಸಿಕ್ಕಳು ;)

ನಾನು ಬಿಡ್ತೀನಾ ?????

ಅಕ್ಕಾ ಟೈಮ್ ಎಷ್ಟು ಅಂತ ಕೇಳಿಯೇಬಿಟ್ಟೆ...!!!! :)

Thursday, May 12, 2011

ಪ್ರೀತಿ ಎಂದರೆ

ಪ್ರೀತಿ ಎಂದರೆ ,
ಮರೆಯಾಗದ ನೆನಪು ,
ಹತ್ತಿಕ್ಕಿದ ಕನಸು,
ತೀರದ ಬಯಕೆ
ಕಾಡುವ ನೋವು,
ಬತ್ತದ ಕಣ್ಣೀರು
ಒಲಿಯದ ಹುಡುಗಿ ????????

Tuesday, April 19, 2011

@ಅರಸಿ@

ಮನದಲ್ಲಿ ಬಯಕೆಗಳು
ಹಸಿ ಹಸಿ..
ಅವಳ ನೋಟ
ಬಿಸಿ ಬಿಸಿ ..
ಹುಟ್ಟಿತು ಮನದಲ್ಲಿ
ಪ್ರೀತಿಯ ಸಸಿ ...
ಅವಳೇ
ನನ್ನ ಅರಸಿ ...
ಎಂದು ನಿರ್ಧರಿಸಿ ..
ಹೊರಟೆ ಅವಳನ್ನರಸಿ.
ಬಂದ ಹಿಂದೆಯೇ
ಅವಳಪ್ಪ
ದೊಣ್ಣೆ ಬೀಸಿ!@
ಬೀಸಿ ಬೀಸಿ !

?!? ನಾನಾರು ?!?

*****************************
ದಯವಿಟ್ಟು ಸರಿಯಾಗಿಲ್ಲದಿದ್ದರೆ ಬಯ್ಯಬೇಡಿ
*****************************
ನೀ ನನ್ನ
ಆರರಲ್ಲಿ ಮೂರು ...
ಹಾಗೂ
ಮೂರರಲ್ಲಿ ಆರು ..
ಮೂರಕ್ಕೆ ಹದಿನೈದು ...

ನಾ ಆರರಲ್ಲಿ ಮೂರೋ
ಮೂರರಲ್ಲಿ ಆರೋ ...
ಆರು ಮೂರಾದರೂ
ಮೂರು ಆರಾದರೂ
ಆ ಆರುಮೂರರಲ್ಲಿ
ನಿನಗೆ ನಾನಾರು?

ಅರ್ಥ : ಆರರಲ್ಲಿ ಮೂರು --ನೀ ನನ್ನ ಜೀವದ ಅರ್ಧ
ಮೂರರಲ್ಲಿ ಆರು --ನೀ ನನ್ನ ಪ್ರಾಣದ ಪ್ರತೀ ಭಾಗ
ಮೂರಕ್ಕೆ ಹದಿನೈದು --ನೀ ನನ್ನ 3*5=15 ಪಂಚಪ್ರಾಣ
ಈಗ ನೀ ಹೇಳು ನಿನಗೆ ನಾನಾರು?

Wednesday, April 13, 2011

# ಋಣ #

ನಿನ್ನ ಸಹನೆಯ ಮಿತಿ

ಏನೆಂದು ಅರಿಯಹೋದೆ

ಅರಿಯುತ್ತ ಹೋದೆ

ಅರಿಯುತ್ತಾ ಹೋದೆ ...

ಅಸಹನೆಯಿಂದ ನಾನೇ ಸುಮ್ಮನಾದೆ ....!

ನಿನ್ನ ಪ್ರೀತಿಯ ಸಾಗರದ

ಗಹನವೇನೆಂದು ಅರಿಯಹೋದೆ

ಅರಿಯುತ್ತ ಹೋದೆ

ಅರಿಯುತ್ತಾ ಹೋದೆ...

ತಟದಲ್ಲೇ ನಿಂತು ಮೂಕನಾದೆ...!

ನಿನ್ನ ವಾತ್ಸಲ್ಯದ ಪರಿ

ಏನೆಂದು ಅರಿಯಹೋದೆ

ಅರಿಯುತ್ತ ಹೋದೆ

ಅರಿಯುತ್ತಾ ಹೋದೆ

ಅವಲೋಕಿಸಲಾಗದೆ ವಿಸ್ಮಿತನಾದೆ ...!

ಓ ಹೆಣ್ಣೇ , ನೀನೊಂದು ತ್ಯಾಗದ ಸಿಂಧು ..

ನೀನಿತ್ತ ಹರುಷದ ಋಣದಲ್ಲಿ ಬದುಕುತ್ತಿರುವೆವು ನಾವಿಂದು....

Friday, February 25, 2011

ಸ್ನೇಹದಲಿ

ಸಾವಿರಾರು ದಿನಗಳ
ಬಾಳಿನಲ್ಲಿ,
ನೂರಾರು ಕೆಲಸವಿರುವ
ದಿನಗಳಲ್ಲಿ,
ಐದಾರು ಬಿಡುವಿರುವ
ಕೆಲಸದ ನಡುವಲ್ಲಿ...
ಎರಡೇ ಎರಡು ಕ್ಷಣ
ಬಿಡುವಿನಲ್ಲಿ ,
ಒಂದೇ ಒಂದು ಸಲ
ನನ್ನ ನೆನೆದು ಆ ಕ್ಷಣದಲ್ಲಿ ,,
ನೀ ನಗುತ್ತಿರು ಸಾಕು ಮನದಲ್ಲಿ
ಅಮರವಾಗಿರುವುದೀ ಸ್ನೇಹ ಯುಗ ಯುಗದಲ್ಲಿ ...
ನಾ ಧನ್ಯ ನಿನ್ನ ಈ ಸ್ನೇಹದಲಿ .....!

Wednesday, February 23, 2011

ಮತ್ತೆ ಬಾ !

ಮನಸು ಬರಿದಾಗಿದೆ
ಕನಸು ಕಿರಿದಾಗಿದೆ
ಆ ದಿನಗಳು ಮಾಸಿ ಹೋಗಿವೆ
ಓ ಗೆಳತೀ ,
ನೀ ನನ್ನ ಬಾಳಲ್ಲಿ ಮತ್ತೆ ಬರಬೇಕಾಗಿದೆ ,
ನಾ ನಿನ್ನ ಜೊತೆಯಲ್ಲಿ ಸ್ವಲ್ಪ ನಗಬೇಕಾಗಿದೆ ..!

Thursday, February 17, 2011

"ಅನಾಥೋ ದೈವ ರಕ್ಷಕ "

ಅದೇಕೋ ಇಂದು ನಾ ಎದುರಲ್ಲೇ ಕುಳಿತಿದ್ದರೂ ನನ್ನ ಕಡೆ ಕಣ್ಣೆತ್ತಿಯೂ ನೋಡಲಿಲ್ಲ.ವಿಶ್ವಾಸ್ ,ದಿನಾ ನಾ ನಿನ್ನ ಜೊತೆಯಲ್ಲೇ ಇರೋದು.ನಿನ್ನ ಜೊತೆಯೇ ನಾನೂ ತಿರುಗುತ್ತಿರುವೆನು. ನನಗೆ ನನ್ನದೇ ಆದ ಎಷ್ಟೇ ಜವಾಬ್ದಾರಿಗಳಿದ್ದರೂ ನಿನ್ನನ್ನು ನೋಡಿಕೊಳ್ಳುವುದು ನನ್ನಿಂದಾಗದ ಕೆಲಸವೇನಲ್ಲ .ಇತ್ತೀಚಿಗೆ ನಿನ್ನ ವರ್ತನೆಗಳೆಲ್ಲವೂ ಬದಲಾಗಿವೆ. ನೀನು ನನ್ನಲ್ಲಿ ಹೇಳಿಕೊಂಡ ನಿನ್ನ ನೆಚ್ಚಿನ ಇಂಜಿನಿಯರಿಂಗ್ ಪದವಿ ಪಡೆದು ಮೂರ್ನಾಲ್ಕು ತಿಂಗಳಾಯ್ತು..
ನಿಮ್ಮಪ್ಪ ಕೊಡಿಸಿರುವ ಸೆಕೆಂಡ್ ಹ್ಯಾಂಡ್ ಕಾರಿನಲ್ಲಿ ನನಗೂ ಒಂದು ಆಸನ ಮೀಸಲು .ಕಾಲೇಜಿಗೆ ಹೋಗುವ ಮೊದಲ ದಿನದಿಂದಲೂ ನಿನ್ನನ್ನು ಗಮನಿಸಿರುವೆ.ಆದರೆ ಇತ್ತೀಚಿನಿಂದ ನೀನು ನನ್ನನ್ನು ಮರೆತಿರುವಂತಿದೆ .ನನ್ನಲ್ಲಿ ಎಲ್ಲಾ ವಿಷಯಗಳನ್ನೂ ಮುಚ್ಚುಮರೆ ಇಲ್ಲದಂತೆ ಹೇಳುತ್ತಿದ್ದವನು ಈಗೇಕೆ ಏನನ್ನೂ ಹೇಳುತ್ತಿಲ್ಲ?ಹಾಗಂತ ನಾ ನಿನ್ನಲ್ಲಿ ಬಾಯಿಬಿಟ್ಟು ಕೇಳುವ ಗೋಜಿಗೂ ಹೋಗುವುದಿಲ್ಲ.
ನನಗೂ ತಿಳಿದಿದೆ ನಿನಗಿನ್ನೂ ಕೆಲಸ ದೊರೆತಿಲ್ಲ .ಇದಕ್ಕೆ ಕಾರಣ ಹಲವಾರಿವೆ..ಆದರೂ ನಿನ್ನಲ್ಲಿ ತಾಳ್ಮೆ ಕಳೆಯುತ್ತಿದೆ.ನಿನ್ನ ವಿಫಲ ಯತ್ನಕ್ಕೆ ಇತರರನ್ನು ದೂಶಿಸುತ್ತಿರುವೆ .ನಿರ್ದೋಶಿಯಾದ ನನ್ನನ್ನು ಪ್ರಮುಖ ಕಾರಣವನ್ನಾಗಿಸಿರುವೆ .ನಾನು ಮಾಡಿರುವುದಾದರೂ ಏನು ? ನಾಲ್ಕು ವರ್ಷಗಳಲ್ಲಿ ನೀನು ಸಾಧಿಸಿರುವುದೇನೂ ನನ್ನ ಗಮನಕ್ಕೆ ಬಂದಿಲ್ಲ.ಅಮೂಲ್ಯ ಸಮಯವನ್ನೆಲ್ಲ ಕಳೆದು ಬಿಟ್ಟೆ.ಅದು ಮತ್ತೆ ಬರುವುದೇ? ಈಗಲಾದರೂ ನಿನ್ನ ಸಾಮರ್ಥ್ಯವನ್ನು ತಿಳಿದು ಪ್ರಯತ್ನಪಟ್ಟರೆ ಅಸಾಧ್ಯವೇನಲ್ಲ.ಸಿಕ್ಕಸಿಕ್ಕವರ ಮಾತನ್ನು ಕೇಳಿ ತಲೆ ಕೆಡಿಸಿಕೊಳ್ಳಬೇಡ. ನಾ ಹೇಗೆ ಹೇಳಲಿ ನಿನಗೆ? ಒಳ್ಳೆಯದು ಕೆಟ್ಟದ್ದನ್ನು ಆರಿಸಿಕೊಳ್ಳುವುದು ನಿನ್ನ ಬಳಿಯೇ ಇದೆ .ಹೀಗೆ ನನ್ನಷ್ಟಕ್ಕೆ ನಾನೇ ಎಂದುಕೊಳ್ಳುತ್ತಿದ್ದೆ.
ಅಷ್ಟರಲ್ಲಿ ವಿಶ್ವಾಸ್ ಕಾರನ್ನು ಬುರ್ರನೆ ಓಡಿಸುತ್ತಾ ದಾರಿಯುದ್ದಕ್ಕೂ ಬೆವರುತ್ತ ಮೊಬೈಲಿನಲ್ಲಿ ಏನೋ ಸಂಭಾಷಣೆ ನಡೆಸುತ್ತ ಹೋಗುತ್ತಿದ್ದ. ನನ್ನ ಬಳಿ ಏನೂ ಹೇಳಲಿಲ್ಲ.ನನಗೂ ಏನೋ ಸಂಶಯ ಬರುತ್ತಿದೆ.ಯಾಕೆಂದರೆ ಯಾರೂ ಕೆಟ್ಟ ಕೆಲಸವನ್ನು ಮಾಡುವಾಗ ನನ್ನ ಬಳಿ ಹೇಳುವುದಿಲ್ಲ..ಯಾಕೆಂದರೆ ನಾನು ಒಳ್ಳೆಯದನ್ನೇ ಅಪೇಕ್ಷಿಸುತ್ತೇನೆ.

ಯಾರದೋ ಫೋನ್ ಬಂತು."ಈಗ ಹೊರಡ್ತಾ ಇದ್ದೀನಿ ನಾ ಒಬ್ಬನೇ ಬರ್ತಾ ಇದ್ದೀನಿ ಅಲ್ಲಿ ಏನೂ ಪ್ರಾಬ್ಲಮ್ ಇಲ್ಲ ತಾನೇ?" ಎಂದ ವಿಶ್ವಾಸ್.ಅತ್ತ ಕಡೆಯಿಂದ "ಏನೂ ಆಗಲ್ಲ ನಾವು ಒಳ್ಳೆ ಕೆಲಸಾನೆ ಮಾಡ್ತಾ ಇದ್ದೀವಿ ಬೇಗ ಬಾ "ಎಂದು ಕೇಳಿ ಬಂತು.ಅರೆ ನಿನ್ನ ಜೊತೆ ನಾ ಇರೋದನ್ನ ಮರೆತೇ ಬಿಟ್ಟೆಯ? ನನ್ನನ್ನು ಬಿಟ್ಟು ಹೋಗಲು ಹೇಗೆ ಸಾಧ್ಯ?ಎಂದು ನಾ ಆಲೋಚಿಸುತ್ತ ಕುಳಿತಿದ್ದೆ ಅಷ್ಟರಲ್ಲಿ ನನ್ನ ಕಡೆಗೆ ತಿರುಗಿ "ನಾನು ತಪ್ಪು ಮಾಡಿದರೆ ದಯವಿಟ್ಟು ನನ್ನ ಕ್ಷಮಿಸು. ನೀ ನನ್ನ ಜೊತೆಯಿರು ನನಗೆ ತುಂಬಾ ಭಯವಾಗ್ತಿದೆ", ಎಂದ. ನಾ ಏನೂ ಹೇಳಲಾರದೆ ಸುಮ್ಮನೆ ಕುಳಿತಿದ್ದೆ..ನನಗೆ ಗೊತ್ತು ಯಾವಾಗ ಏನು ಮಾಡಬೇಕೆಂದು..!
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಸುಮಾರು ಏಳೆಂಟು ತಾಸುಗಳ ದಾರಿ. ಹೋಗುವಾಗ ಹತ್ತಾರು ಬಾರಿ ಫೋನ್ ಕರೆಗಳು.
ಅತ್ತ ಮಾತಾಡುತ್ತ ಅಜಾಗರೂಕತೆಯಿಂದ ಕಾರ್ ನಡೆಸುವಾಗ ರಸ್ತೆಯ ಬದಿಯಲ್ಲಿ ನಡೆದು ಬರುತ್ತಿದ್ದ ಮುದುಕಿಗೆ ಗುದ್ದಿಬಿಟ್ಟಿತು.
ಪಾಪ, ಆ ಮುದುಕಿ ರಸ್ತೆಯಿಂದಾಚೆ ಮೋರಿಗೆ ಅಪ್ಪಳಿಸಿ ಬಿದ್ದುಬಿಟ್ಟಳು. ಎಲ್ಲಿ ಜನರೆಲ್ಲಾ ಸೇರಿ ತನ್ನನ್ನು ಹಿಡಿಯುವರೋ ಎಂದು ಹೆದರಿ ಕಾರನ್ನು ನಿಲ್ಲಿಸದೆಯೇ ಸತ್ತಳೋ ಬದುಕಿದಳೋ ಎಂಬುದನ್ನೂ ನೋಡದೆ ಮಾನವೀಯತೆಯನ್ನೇ ಮರೆತವನಂತೆ ಅಲ್ಲಿಂದ ವೇಗವಾಗಿ ಬಂದುಬಿಟ್ಟ.ಅವನ ಕೈಕಾಲುಗಳು ಕಂಪಿಸುತ್ತಿದ್ದವು.ಮಧ್ಯಾಹ್ನವೆನ್ನುವಷ್ಟರಲ್ಲಿ ಶಿವಮೊಗ್ಗ ಬಸ್ ನಿಲ್ದಾಣದ ಬಳಿ ಸ್ನೇಹಿತ ವಿದ್ಯಾಧರನೆಂಬ ತೆಳು ಗಡ್ಡದ ಯುವಕನೊಬ್ಬ ಕಾರ್ ಏರಿದ.ಅಲ್ಲೇ ಪಕ್ಕದ ಇಪ್ಪತ್ತು ಕಿ.ಮೀ ದೂರವಿರುವ ಸಂಪಿಗೆಹಳ್ಳಿ ಎಂಬಲ್ಲಿ ಇವರ ಡೀಲ್ ಇತ್ತು. ಆ ಊರಿನ ಕಾಳೇಗೌಡ ಎಂಬುವರು ಸುಕನ್ಯ ಎಂಬ 15 ವರ್ಷದ ಬಾಲಕಿ ಹಾಗು ಅವಳ ತಮ್ಮ 10 ವರ್ಷದ ಸಂಚಿತ್ ಎಂಬ ಅನಾಥ ಮಕ್ಕಳಿಗೆ ಆಶ್ರಯ ನೀಡಿದ್ದರು.ಆಶ್ರಯ ನೀಡಿರುವ ಹೆಸರಿನಲ್ಲಿ ಆ ಇಬ್ಬರು ಕರುಣೆ ಇಲ್ಲದವನಂತೆ ಮನಬಂದಂತೆ ದುಡಿಸುತ್ತಿದ್ದ ಕಾಳೇಗೌಡ. ಆ ಮಕ್ಕಳಿಗೆ ಮುಕ್ತಿ ದೊರಕಿಸುತ್ತೇವೆ ಎಂದು ಅಲ್ಲಿಂದ ಆಸೆ ತೋರಿಸಿ ಕರೆದೊಯ್ದು ಬಾಲಕನನ್ನು ನಡುದಾರಿಯಲ್ಲಿ ಬಿಟ್ಟು ಬೆಂಗಳೂರಿನಲ್ಲಿ ಯಾರಿಗೋ ಐದು ಲಕ್ಷಕ್ಕೆ ಮಾರುವುದು ವುದ್ದೆಶವಾಗಿತ್ತು. ಆದರೆ ವಿಶ್ವಾಸ್ನ ಬಳಿ ಆ ಬಾಲಕರನ್ನು ತಾನು ಅನಾಥಾಶ್ರಮಕ್ಕೆ ಸೇರಿಸುವೆನೆಂದೂ ತನಗೆ ಸಹಾಯ ಮಾಡಿದರೆ ಐವತ್ತು ಸಾವಿರ ಕೊಡುವೆನು ಎಂದು ಹೇಳಿ ನಮ್ಬಿಸಿದ್ದನು.
ಹಳ್ಳಿಯಲ್ಲಿ ಆ ಇಬ್ಬರು ಮಕ್ಕಳನ್ನು ಒಪ್ಪಿಸಿ ಎಲ್ಲರ ಕಣ್ತಪ್ಪಿಸಿ ಕಾರಿನಲ್ಲಿ ಕೂರಿಸಿ ಹೊರಡಲು ಹೇಳಿದ ವಿದ್ಯಾಧರ.ಇದೆಲ್ಲಾ ನೋಡುತ್ತಾ ಸುಮ್ಮನೆ ಕುಳಿತಿದ್ದ ನನ್ನ ಕಡೆ ತಿರುಗಿ ಭಯದ ನಗೆ ಬೀರುತ್ತ ಸಲಾಂ ಹೊಡೆದು ಸುಮ್ಮನಾದ ವಿದ್ಯಾಧರ. ನಾನು ಇವನ ವುದ್ದೆಶವನ್ನೆಲ್ಲ ಮೊದಲೇ ಲೆಕ್ಕ ಹಾಕಿದ್ದೆ .ಇಂಥವರ ವಿಷಯ ನನಗೆ ತಿಳಿಯದೆ ಇನ್ನಾರಿಗೆ ತಿಳಿಯುತ್ತದೆ?ಮುಂದೆ ಇವನಿಗೆ ಗ್ರಹಚಾರ ಕಾದಿದೆ ಇವನ ವಾಯಿದೆ ಮುಗಿಯುತ್ತ ಬಂದಿದೆ ಎಂದು ನಾ ಸುಮ್ಮನಾದೆ.
ಹೇಗಾದರೂ ಮಾಡಿ ವಿದ್ಯಾಧರನಿಂದ ಈ ಇಬ್ಬರು ಮಕ್ಕಳನ್ನು ರಕ್ಷಿಸುವುದು ನನ್ನ ಹೊಣೆಯಾಗಿತ್ತು.ರಾತ್ರಿ ಹಿಂದಿರುಗುವಾಗ ಅದೇ ದಾರಿಯಲ್ಲಿ ಆ ಸಮಯದಲ್ಲಿ ಮುದುಕಿಯ ಶವಯಾತ್ರೆ ನಡೆದುಬರುತ್ತಿತ್ತು. ಇದನ್ನು ಕಂಡ ವಿಶ್ವಾಸ್ಗೆ ಅದೇ ಮುದುಕಿ ಎಂದು ಖಚಿತವಾಗಿ ತೀವ್ರ ರೋಧನೆಯಾಯಿತು.ಅವನಿಗೆ ಜೀವಸಂಕಟ ಶುರುವಾಯಿತು.ಅವಳನ್ನು ಆಗಲೇ ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು ಎಂದು ಮರುಗಿದ.ಹೀಗೆ ಕಂಪಿಸುತ್ತ ಕಾರ್ ನಡೆಸುವುದು ಬೇಡವೆಂದು ನನಗನ್ನಿಸಿತು.ವಿದ್ಯಾಧರ್ ತಾನು ಡ್ರೈವಿಂಗ್ ಮಾಡುವೆನೆಂದು ಕುಳಿತ..ವಿಶ್ವಾಸ್ ಹಿಂದೆ ಬಂದು ಕುಳಿತ..ಸ್ವಲ್ಪ ದೂರ ಹೋಗುವಷ್ಟರಲ್ಲಿ ನನ್ನ ಕೆಂಗಣ್ಣ ದೃಷ್ಟಿ ವಿದ್ಯಾಧರನ ಮೇಲೆ ಬಿತ್ತು.ಅಷ್ಟರಲ್ಲೇ ಎದುರಿನಿಂದ ಯಮದೂತನಂತೆ ನುಗ್ಗಿಬಂದ ಲಾರಿಯೊಂದು ಅಪ್ಪಳಿಸಿ ಅದೇ ವೇಗದಲ್ಲಿ ಸಾಗಿಹೊಯ್ತು. ಎಲ್ಲವೂ ಕ್ಷಣದಲ್ಲೇ ಮುಗಿದುಹೋಗಿತ್ತು.ವಿದ್ಯಾಧರ ತಲೆಗೆ ಏಟು ಬಿದ್ದು ಅಲ್ಲೇ ಮೃತನಾದ ವಿಶ್ವಾಸ್ ನ ಕೈಕಾಲುಗಳಿಗೆ ಗಾಯವಾಗಿತ್ತು..ನನ್ನ ಮೇಲೆ ಆ ಎರಡು ಮಕ್ಕಳು ಬಿದ್ದಿದ್ದರು.ನನ್ನ ಮೇಲೆ ಬಿದ್ದಿದ್ದರಿಂದ ಅವರಿಗೇನೂ ಗಾಯಗಲಾಗಲಿಲ್ಲ.ನಾನೂ ತುಂಬಾ ಗಂಭೀರ ಸ್ಥಿತಿಯಲ್ಲಿ ಗಾಯಗೊಂಡಿದ್ದೆ .ಮಕ್ಕಳು ನಿಧಾನವಾಗಿ ಎದ್ದು ತಮ್ಮ ಮುಗ್ಧ ಕೈಗಳಿಂದ ನನ್ನನ್ನು ಸವರುತ್ತ "ಅಬ್ಬಾ ನಿಮ್ಮಿಂದ ನಾವು ಬದುಕಿದೆವು" ಎಂದೆನ್ನುತ್ತ ಅತ್ತವು.ವಿಶ್ವಾಸ್ನೂ ನನಗೆ ಕೈ ಮುಗಿದ ಒಟ್ಟಾರೆ ನನ್ನ ಮೌನವೇ ಎಲ್ಲದಕ್ಕೂ ಕಾರಣವಾಗಿತ್ತು.ಹಲವು ದಿನಗಳ ಚಿಕಿತ್ಸೆಯ ಬಳಿಕ ವಿಶ್ವಾಸ್ ಸಹಜ ಸ್ಥಿತಿಗೆ ಬಂದ. ಅವನು ಆ ಮಕ್ಕಳನ್ನು ಅನಾಥಾಶ್ರಮಕ್ಕೆ ಸೇರಿಸಿದ ಆದರೆ ನನ್ನ ಕೈಕಾಳುಗಲೆರಡೂ ಮುರಿದಿದ್ದವು ನನ್ನನ್ನು ಇನ್ನು ತನ್ನ ಹೊಸ ಕಾರಿನಲ್ಲಿ ಕೂರಿಸಿಕೊಳ್ಳಲು ಅವನಿಗೆ ಇಷ್ಟವಾಗಲಿಲ್ಲ.ಹೊಸ ಕಾರಿನಲ್ಲಿ ಹೊಸದೊಂದು ಮೂರ್ತಿಯನ್ನು ತಂದು ಕೂರಿಸಿದ ! ಆದರೆ ಮಕ್ಕಳು ತಮ್ಮೊಂದಿಗೆ ನನ್ನನ್ನು ಕರೆದೊಯ್ದರು ನನ್ನ ಕೈಕಾಲುಗಳನ್ನು ಅಂಟಿಸಿ ಜೋಡಿಸಿದರು.ಕಾರಿನ ಡ್ಯಾಶ್ ಬೋರ್ಡ್ ಮೇಲೆ ಕುಳಿತಿದ್ದ ನನ್ನಂತಹ ಪುಟ್ಟ ವಿನಾಯಕನಿಗೆ ಅನಾಥರ ರಕ್ಷಿಸುವುದೂ ತಿಳಿದಿದೆ ದುಷ್ಟರ ಶಿಕ್ಷಿಸುವುದೂ ತಿಳಿದಿದೆ.

Monday, February 7, 2011

ಬಣ್ಣ?

ನಾಲ್ಕು ವರ್ಷಗಳ ಮುನ್ನ
***
ಒಮ್ಮೆ ಮಾತ್ರ ನೋಡಿದ್ದೆ ಅವಳನ್ನ
***
ತುಂಬಿರುವಳು ನನ್ನ ಕಣ್ಣ
***
ಮರೆಯಲಾಗದು ಅವಳ ಚೆಲುವನ್ನ
***
ಮೈಮರೆತು ನಾನಾಗಿರುವೆ ಗೋಡೆಗೆ ಬಳಿಯುವ ಸುಣ್ಣ
***
ಅವಳಾಗುವಳೇ ಸುಣ್ಣದ ಮೇಲೆ ಬಡಿಯುವ ರಂಗು ರಂಗಿನಾ ಬಣ್ಣ?