Monday, October 10, 2011

ಕವಿರಾಜ್

ಕಣ ಕಣದಲ್ಲೂ ಕಲೆತಿರುವ ಶಾರದೆಯ
ಪದಗಳಲ್ಲಿ ಶ್ರುತಿಯೊಡನೆ ಪೋಣಿಸಿ
ನಾಗವಲ್ಲಿಯ ಮೊಗದ ಸೌಂದರ್ಯದ ಬಲದಲ್ಲಿ  
ಗರನೆ ಗರ ಗರನೆ ಧರಣಿಯ ತಿರುಗಿಸಿ
ಮಂದಾಕಿನಿಯ ಸುಡುವ ಕಿಡಿಯಲ್ಲಿ
ಸಿಡಿಲನ್ನು ಹೊತ್ತಿಸಿ
ಗಗನವೇ ಬಾಗಿ ಹೇಳಿದಂತೆ
ಪ್ರೀತಿಯನ್ನು,
ಗುಬ್ಬಚ್ಚಿ ಗೂಡಿನಲ್ಲಿ ಬಚ್ಚಿಟ್ಟು ,
ಹಾರ್ಟ್ ಅನ್ನೋ ಅಡ್ಡಾದಲ್ಲಿ

ನಡೆದಾಡುವ ಕಾಮನಬಿಲ್ಲ ಜೊತೆ

ಜೇನ ಹನಿಯ ಜಿನು ಜಿನುಗಿಸಿ
ಶೀತಲಾ ಕೋಮಲಾ ತಂಗಾಳಿಯಾ ಬಾಳಲ್ಲಿ ತಂದ ಪ್ರೀತಿಯು  
ಒಂದೇ ಒಂದು ಸಾರಿ  ಕಣ್ಮುಂದೆ ಬಂದಾಗ 
ಸವಿ ಮಾತೊಂದ ಪಿಸುಗುಡುತ್ತಲೇ
ಹೂಮುತ್ತ ಕದ್ದು ಕೊಟ್ಟ ...
ಆದರೂ
ಸುಮ್ಮನೆ ಯಾಕೆ ಬಂದೆ  
ಮಿಂಚಂತೆ ಕಣ್ಣ ಮುಂದೆ ಎಂಬ ಪ್ರಶ್ನೆ ಬೇರೆ ? 

ಹೀಗೇಕೆ ನಮಗೆ ನೆನೆಪಾಗುತ್ತೆ ಈ ಸಾಲುಗಳು ?
ಯಾಕೆ ಅಂದ್ರೆ !!
ಥರ ಥರ ಥರ ಒಂಥರಾ ಕಾವ್ಯ
ಯಾರೂ ಬರೆಯೋಕಾಗೋಲ್ಲ  ನಮ್ ಕವಿರಾಜ್ ಥರ...!


ರವಿ ಕಾಣದ್ದನ್ನು ಕವಿ ಕಂಡನಂತೆ
ಕವಿ ಕಾಣದ್ದನ್ನು ನಮ್ಮ ಕವಿರಾಜ್ ಕಂಡರಂತೆ ...
ಭಾವ ಸಿಂಚನಕ್ಕೆ ಮುನ್ನುಡಿಯ ಮುತ್ತನ್ನಿತ್ತು 
ಹಾರೈಸಿದ ಕವಿರಾಜ್ ರವರಿಗೆ ಭಾವಪೂರ್ಣ ವಂದನೆ...

No comments: