Monday, March 19, 2012

ಕಾರಣ ??

ಮನಸ್ಸು ಇದೆಯಲ್ಲ ಇದಕ್ಕೆ ಬಯಕೆ ಅನ್ನೋದಿದೆಯಲ್ಲ ಅದು ತೀರದಷ್ಟು ...ಇನ್ನೂ ಬೇಕು ಇನ್ನೂ ಬೇಕು ಅಂತ ಹಾತೊರೆಯುತ್ತಿರುತ್ತದೆ. ನನ್ನ ಮನಸ್ಸಲ್ಲಿ ಮುಚ್ಚಿಟ್ಟ ವರ್ಷಗಳಿಂದ ಕುದಿಯುತ್ತಿದ್ದ ಬಯಕೆ ಈಗ ತಡೆಯಲಾಗದಷ್ಟು ಬುಗಿಲೆದ್ದು ಜ್ವಾಲಾಮುಖಿಯಾಗಿ ಹೊರಚಿಮ್ಮಿದೆ .
ನನ್ನ ಜೀವನದಲ್ಲಿ ಬಂದಿರುವ ಅನುರಾಗದ ಅಲೆ ನನ್ನ ಸಂಸಾರ ನೌಕೆಯನ್ನು ಮುಳುಗಿಸುವ ಬಾರಿ ಸೂಚನೆಯನ್ನು ನೀಡುತ್ತಿದೆ.

Actually , ದಿನ ನಾನು ನನ್ನಲ್ಲಿದ್ದ ತೀವ್ರತಮ ಆಸೆಯನ್ನ ನನ್ನಾಕೆಗೆ ತಿಳಿಸಿಯೇ ಬಿಟ್ಟೆ .ಪಾಪ ಸಪ್ತಪದಿ ತುಳಿದು ಅಗ್ನಿಸಾಕ್ಷಿಯಾಗಿ ಮದುವೆಯಾಗಿ ನನಗಾಗಿ ಸರ್ವಸ್ವವನ್ನು ನೀಡಿರುವ ಆಕೆ ಹುಚ್ಚು ಬಯಕೆಗೆ ಒಪ್ಪಿಗೆ ನೀಡುವಳೇ? ನನಗೆ ಬೇಕಾಗಿದ್ದು daivorce.

ಅದೇಕೋ ಏನೋ ನನ್ನ ಕಾಲೇಜ್ ಗೆಳತಿ ಸ್ವಪ್ನ ಮೇಲೆ ನನಗೆ ಅಪಾರ ಪ್ರೀತಿ....ಆಕೆಗೂ ಅಷ್ಟೇ. ಗಳಿಗೆಯೇ ನನ್ನ ಜೊತೆ ಬಾಳಲು ತಯ್ಯಾರಾಗಿದ್ದಾಳೆ ಆಕೆ . ನಮಗೆ ಬೇಕಿರುವುದು ನನ್ನ ನನ್ನಾಕೆಯಾ ಡೈವೊರ್ಸ್ ಅಷ್ಟೇ.

ನನ್ನ ಮಗ 4 ವರ್ಷದವ ಅವನ ಭವಿಷ್ಯದ ಬಗ್ಗೆ ನನಗೆ ಚಿಂತೆ ಕಾಡುತ್ತಿದೆಯಾದರೂ ಸ್ವಪ್ನ ನನಗೆ ಮುಖ್ಯ...


ನನ್ನ ಹೆಂಡತಿ ಸೌಜನ್ಯ ಮೃದು ಸ್ವಭಾವದವಳು.. ಮೊದಮೊದಲು ನನಗೆ ತುಂಬಾ ಇಷ್ಟವಾಗುತ್ತಿದ್ದಳು ಕಾರಣ ಅವಳ ಆಗಿನ ಅಂದದ ಬಳುಕುತ್ತಿದ್ದ ಮೈಮಾಟ . ಹುಚ್ಚು ಹಿಡಿಸುವಂತಿದ್ದ ಮುಖ ...ಆದರೆ ಇತ್ತೀಚೆಗೆನೋ ಅವಳ ಕಳೆಗುಂದಿದ ಮುಖ ಉಬ್ಬಿದ ಮೈ ನನಗೆ ಹಿಡಿಸುತ್ತಿಲ್ಲ ..

ನನ್ನ ಗೆಳತಿ ತೋರಿಸುವ ಪ್ರೀತಿ ಅವಳ ಮೈಮಾಟ ಬಿಂಕದ ನಡುಗೆ ಎಲ್ಲ ನನ್ನ ಕೆರಳಿಸಿವೆ .ನಾ ಡೈವೊರ್ಸ್ ಪೇಪರ್ ಗೆ ಬೇಕಾದೆಲ್ಲ ದಾಖಲೆಯನ್ನ ನನ್ನಾಕೆಯ ಮುಂದಿಟ್ಟೆ. ಕಾನೂನಿನ ಪ್ರಕಾರ ಬರಬೇಕಾದ ಆಸ್ತಿಯನ್ನೂ ನಾ ಅವಳಿಗೆ ಕೊಡಲು ಸಿದ್ಧನಿದ್ದೆ .ದುಃಖ ತಡೆಯಲಾರದೆ ಆಕೆ ಏನೂ ಮಾತಾಡದೆ ಎರಡುಮೂರು ದಿನ ನನ್ನೆದೆ ಸುಳಿಯಲೇ ಇಲ್ಲ ..

ಕೊನೆಗೊಂದು ದಿನ ನನ್ನ ಬಳಿ ತೀವ್ರ ರೋಧನೆಯಿಂದ ತನ್ನಲ್ಲಿರುವ ಅನಿಸಿಕೆಯೆಲ್ಲ ಹಂಚಿಕೊಂಡಳು.ನಮ್ಮ ಮಗು ಇನ್ನು ಚಿಕ್ಕವನಾದ್ದರಿಂದ ಅವನಿಗೆ ತಂದೆಪ್ರೀತಿಯ ಅವಶ್ಯಕತೆ ಇದೆ ಆದಕಾರಣ ಸ್ವಲ್ಪ ಕಾಲಾವಕಾಶ ಕೊಡಿ ಎಂದು ಅಂಗಲಾಚಿದಳು .ನಾನೂ ಸ್ವಲ್ಪ ದಿನದಲ್ಲಿ ಈಕೆ ಮಾನಸಿಕವಾಗಿ ಸಿದ್ಧಳಗುತ್ತಲೇ ಅಂತ ಸುಮ್ಮನಿದ್ದೆ .

ದಿನೇದಿನೇ ನನ್ನ ಆಸೆ ಬಲವಾಗುತ್ತಿದ್ದಂತೆ ಸೌಜನ್ಯ ನನ್ನ ಮೇಲೆ ಸೆಂಟಿ ಮೆಂಟಲ್ ಪ್ರಭಾವ ಬೀರ ತೊಡಗಿದಳು . ಪ್ರೀತಿ ಸಂಬಂಧ ಅಂತೆಲ್ಲ ಭಾವನೆಗಳ ಸರಪಣಿಯಿಂದ ನನ್ನ ಕಟ್ಟೋದಕ್ಕೆ ನೋಡ್ತಾ ಇದಾಳೆ.ಎಷ್ಟೇ ಆದರು ನನ ಮನಸ್ಸು ಬದಲಾಗೊದಕ್ಕೆ ಸಾಧ್ಯ ಇಲ್ಲ.

ಒಂದು ವಾರ ಆಯ್ತು ನಾ ದಿನಾ ಸ್ವಪ್ನ ಮನೆಗ್ ಹೋಗಿ ಬರೋದು ಮಾಡ್ತಾನೆ ಇದ್ದೀನಿ. ಆದರು ದಿನಾ ಸೌಜನ್ಯ ಮಾತ್ರ ಏನೂ ಮಾತಾಡ್ತಾ ಇಲ್ಲ ಇದರ ಬಗ್ಗೆ..ನಾನೂ ಕಾಯ್ತಾನೆ ಇದ್ದೇನೆ.

ಮಾಮೂಲಿ ಅಂತೆ ದಿನ ಸ್ವಪ್ನ ಮನೆಗ್ ಹೋಗಿ ಬರ್ತಾ ಇದ್ದೆ .ಸೌಜನ್ಯ ನಮ್ಮ ಮನೆ ಬಾಗಿಲಲ್ಲಿ ನಿಂತು ಕಾಯ್ತಾ ಇದ್ಲು.ಅದೇನೋ ಅವಳ ಮುಖದಲ್ಲಿ ತುಂಬಾ ಕಾಂತಿ ಇತ್ತು.ಮದುವೆ ಆದ ದಿನದಿಂದಾ ನಾ ರೀತಿ ಸೊಬಗನ್ನ ನೋಡೇ ಇರ್ಲಿಲ್ಲ...

ಹಾ ಇದೇನೋ ಮೋಡಿ ಇರ್ಬೇಕು ಅಂತ ಸುಮ್ನಾದೆ...

ಇನ್ನೂ ಎರಡು ದಿನಾ ಬಿಟ್ಟು ನೋಡಿದ್ರೆ ಇನ್ನೂ ತುಂಬಾ ತುಂಬಾ ಚೆನ್ನಾಗಿ ಕಾಣಿಸುತ್ತ ಇದ್ಲು.

ಎಷ್ಟೇ ಆದರೂ ನಂಗೆ ನನ್ನ ಗೆಳತಿ ಸ್ವಪ್ನಳ ಮೈಮಾಟ ಮೀರ್ಸೋದಕ್ಕೆ ಆಗಲ್ಲ ಅಂತ ಸುಮ್ಮನಿದ್ದೆ.

ಇನ್ನೂ ಎರಡು ದಿನಾ ಬಿಟ್ಟು ನೋಡಿದ್ರೆ ಮನೇಲಿ ಅಡುಗೆ ರುಚಿ ತುಂಬಾನೇ ಬದಲಾಗಿಬಿಟ್ಟಿದೆ ..ದಿನಾಲು ಕರಿದ ಎಣ್ಣೆ ತಿಂಡಿ ನಂಗೆ ಇಷ್ಟವಾಗಿರೋ ಗುಲಾಬ್ ಜಾಮೂನ್ ಎಲ್ಲ ಮಾಡಿ ಕೊಡ್ತಾ ಇದಾಳೆ ಸೌಜನ್ಯ .

ಅದೇನೋ ಆಕಸ್ಮಿಕವಾಗಿ ಅವಳ ಕೈ ಹಿಡಿದು ನೋಡಿದರೆ ಆಹಾ ಅದೆಂತಾ ಕೋಮಲತೆ ...ನಿಜವಾಗಲೂ ಮತ್ತೊಮ್ಮೆ ಮಗದೊಮ್ಮೆಅವಳನ್ನ observe ಮಾಡಿ ನೋಡಿದೆ ಮುಂಚೆ ಗಿಂತಾ ತುಂಬಾ ಬದಲಾಗಿ ಬಿಟ್ಟಿದಾಳೆ .

ಅಯ್ಯೋ ಇದೇನು ನಿಜಾನಾ ಅನ್ನೋವಷ್ಟು ..ಜಸ್ಟ್ ಎರಡು ವಾರದೊಳಗೆ ಇಷ್ಟೆಲ್ಲಾ ಬದಲಾವಣೆ ಅಂದ್ರೆ ಇದು ನನ್ನ ಮೇಲೆ ಅವಳು ಇಟ್ಟಿರೋ ಅಗಾಧ ಪ್ರೀತಿ ಅಂತ ನಂಗೆ ಮನವರಿಕೆ ಆಗೋಕೆ ತಡ ಆಗ್ಲಿಲ್ಲ ..

ನೇರವಾಗಿ ನನ್ನ ಸೌಜನ್ಯ ಮುಂದೇನೆ ಡೈವೊರ್ಸ್ ಪೇಪರ್ ಗಳನ್ನ ಹರಿದು ಹಾಕ್ಬಿಟ್ಟೆ.ಹಾಗೇನೆ ಸ್ವಪ್ನಾಗೂ ವಿಷಯನ ಕಾಲ್ ಮಾಡಿ ಹೇಳ್ಬಿಟ್ಟೆ . ನಂತರ ಸ್ವಪ್ನ ನನ್ನ ಮರತ್ ಬಿಟ್ಲು ... ಹೀಗೆ ಎರಡು ಮೂರು ದಿನಗಳು ಕಳೆದಿತ್ತು .. ನಾನು ನನ್ನ ಸಂಸಾರ ಮತ್ತೆ ಸರಿ ಆಯ್ತು ...

ಆದ್ರೆ ಇಷ್ಟು rapid ಆಗಿ ಸೌಜನ್ಯ ಬದಲಾಗಿದ್ದು ಮಾತ್ರ ರಹಸ್ಯವಾಗೇ ಇತ್ತು. ನಾ ಒಂದು ದಿನ ಕುತೂಹಲ ತಡೆಯೋಕೆ ಆಗದೆ ಸೌಜನ್ಯನ ಕೇಳಿಯೇ ಬಿಟ್ಟೆ ..
ಉತ್ತರ  ಕೇಳಿ ನನಗೆ 15  ನಿಮಿಷ ಜ್ಞಾನ ತಪ್ಪೋದೆ ಮಾರಾಯ್ರೆ???!! ..

ಎರಡು ವಾರದಲ್ಲಿ ಹೊಮ್ಮುವ ಮೈಕಾಂತಿ  ಫೇರ್ & ಲವ್ಲೀ ಅಂಡ್ ಫೇರ್ & ಲವ್ಲೀ ಅಂತ ಅನ್ನೋದಾ ...!!!


ಸ್ವಲ್ಪ  ಹೊತ್ತಾದ ಮೇಲೆ ಗೊತ್ತಾಗಿದ್ದು ಸಂಬಂಧಗಳಿಗೆ ಫೇರ್ ಮತ್ತು ಲವ್ಲೀನೆಸ್ಸ್ ನ ಡಬಲ್ ಅವಶ್ಯಕತೆ ಇದೆ ಅಂತ  ..!
ಯಾವ ಬದಲಾವಣೆಯು ನಮ್ಮ ಮನಸಿನಿಂದಲೇ ಶುರುವಾಗಬೇಕು ...


2 comments:

Reshma Rao said...

hahha :) ibbibru bekeno ninge?!!
chennagide :)

Bharath R Bhat said...

hmm obru saakagalla..:)