Thursday, March 25, 2010

ಪ್ರೀತಿಯ ಪ್ರಸಾದ

ಪ್ರೀತಿಗೆಂದೆಂದು ಇಲ್ಲ ತಿರಸ್ಕಾರ
ತಿಳಿದರೆ ತಾನಾಗಿಯೇ ತಿಳಿಯುವುದು
ಕೆಲವೊಮ್ಮೆ ಪ್ರೀತಿಸುವ ಮನವನು ಅರಿಯದು ..
ಅರಿಯದೆ ಯಾರನು ಪ್ರೀತಿಸದು ....
ಸಾಧ್ಯವಾದರೆ ಸಂಗಾತಿಯಾಗುವುದು
ಸಲ್ಲದಿರೆ ಮರೀಚಿಕೆಯಾಗುವುದು
ಸಾಯುವವರೆಗೂ ಭಾವನೆಗಳ ಸಾಯಿಸಿ
ಎದೆಯ ಗೂಡಿನ ಒಳಗೆ ಸಮಾಧಿಯ ಕಟ್ಟಿ
ಹೂತಿಡುವುದಕ್ಕಲ್ಲ ಪ್ರೀತಿ
ಭಾವಗಳ ಬಯಲುಗೊಳಿಸಿ ..
ತಿಳಿಯಾಗುವುದು ಮನದಾಳದ ಭೀತಿ ...

ಜೋಪಾನವಾಗಿ ತೆರೆದಿಟ್ಟ ಪ್ರೀತಿ
ಪ್ರೇಮಿಯ ನಾಟದೇ ಹೋದಲ್ಲಿ
ಮನೆಯ ಮುಂದಿನ ತುಳಸಿ ಕಟ್ಟೆಯಂತೆ
ಪ್ರೀತಿಯ ನೆಟ್ಟು ಪೂಜಿಸುವ ...
ಕೊನೆಪಕ್ಷ ವೈರಾಗ್ಯವೆಂಬ ಪ್ರಸಾದವಾದರು ಸಿಕ್ಕೀತು ....!

No comments: